ಯಾರಿಗೂ ಬಾಗದೆ ಇರು ಬದುಕೇ
ನೀ ಇದ ಹಾಗೆ ಇರು ಬದುಕೇ
ಬಿಸಿಲು ಯಾವತ್ತು ಇರುವುದು ಜಗದಲ್ಲಿ
ಹೂವಂತೆ ಬಾಡದೆ ಹಣ್ಣಾಗಿ ಮಾಗಿರು ಬದುಕೇ
ಯಾರು ಏಷ್ಟು ಹೊತ್ತು ಯಾರಿಗೆ ಗೊತ್ತು
ನೀ ನಿನ್ನಷ್ಟಕೆ ಮುಂದೆ ಸಾಗಿರು ಬದುಕೇ
ಜಗವ ಕಾಣುವ ಹಂಬಲ
ಆದರು ಹೊಸ್ತಿಲಿಗೆ ನೀ ತಾಗಿರು ಬದುಕೇ
ಎಷ್ಟೋ ಉಸಿರಿನಿಂದ ಪೋಣಿಸಿರುವ ಮಾಲೆ ನೀನು
ಉದ್ವೇಗದಲ್ಲಿ ಬಿಡಿ ಆಗದಿರು ಬದುಕೇ