0
ಬೆಳದಿಂಗಿಳಿಗಾಗಿ ಕಾದವನು
Posted by Vigneshwar
on
1:09 AM
in
ಕಾವ್ಯ
ಗೋಡೆ ಇರದ ಬಯಲಲ್ಲಿ
ಕರಿ ಮೋಡದ ನೆರಳಲ್ಲಿ
ಬಿಕ್ಕಲಿಸುತಿಹನೊಬ್ಬ
ಮುಚ್ಚಿ ಕಣ್ಣ ಬೆರಳಲ್ಲಿ
ಯಾರಿಲ್ಲದವನ ತಲೆ ಒರಗಿದೆ
ಭೂತಾಯಿಯ ಮಾಡಿಲಲ್ಲಿ
ಕಂಬನಿ ಜೊತೆ ಇಂಗುತಿಹುದು
ಪ್ರತಿ ದುಃಖ ಅವಳಲ್ಲಿ
ಧಿಂಗುಡುವ ಏಕಾಂತ
ದಿಕ್ಕಿಲ್ಲದೆ ಬೀಸೊ ಗಾಳಿ
ತಾರದು ನೆಮ್ಮದಿ ಮನಕೆ
ಬೆಳದಿಂಗಳಿರದ ಇರುಳಲ್ಲಿ
Post a Comment